Friday, June 29, 2007

ಗೋಕುಲಾಷ್ಟಮೀಗೂ ಇಮಾಂ ಸಾಬೀಗೂ ಏನ್ ಸಂಬಂಧ?

ಸುಮಾರು ದಿನಗಳಿಂದ ನೋಡ್ತಾ ಇದೀನಿ. ಅಂತರ್ಜಾಲ ಕನ್ನಡ ಪತ್ರಿಕೆಯ ಪ್ರತಿಯೊಂದು ಲೇಖನದ ಬಲಗಡೆಯಲ್ಲಿ (ಭೂತದ ಕೋಲವನ್ನು ನೆನಪಿಸುವ) ಚಿತ್ರವೊಂದರ ಕೆಳಗೆ Stop Rosie's Madness! ಎಂಬ ಜಾಹಿರಾತೊಂದು ಬರುತ್ತಿದೆ. ಯಾರೀ ರೋಸಿ? ಅವಳಿಗೆ ಏನು ಹುಚ್ಚು ಹಿಡಿದಿದೆ? ಅದನ್ನು ನಾವು ಕನ್ನಡಿಗರೇಕೆ ವಾಸಿ ಮಾಡಬೇಕು?
ನಮ್ಮಲ್ಲೂ ಈಯಮ್ಮನಂತ ಹುಚ್ಚರಿರಬಹುದು. ಆದ್ರೆ ಆವರ ಹುಚ್ಚನ್ನು ಬಿಡಿಸಿ ಅಂತ ಅಮೆರಿಕಾದ ಪೇಪರ್ ಗಳಲ್ಲಿ ಹಾಕಿದ್ದು ನಾನೆಲ್ಲೂ ನೋಡಿಲ್ಲ? ಬೇರೆಯೋರಿಗೆ ಇಂತ ಪುಕ್ಸಟ್ಟೆ ಪ್ರಚಾರ ಕೋಡೋದು ಯಾಕೆ ಅಂತ ಅರ್ಥ ಆಗ್ತಿಲ್ಲ. ಒಂದ್ವೇಳೆ ಇದು ಜಾಹಿರಾತು ಇರಬಹುದು ಅಂತ ಇಟ್ಕೋಳಿ. ಆದ್ರೂ ಕನ್ನಡಿಗರಿಗೂ ಈಯಮ್ಮನಿಗೂ ಯಾವ ಬಾದರಾಯಣ ಸಂಬಂಧಾನೂ ಇಲ್ಲ. ಈ ಪೇಪರ್ನಲ್ಲಿ ಈ ಜಾಹಿರಾತು ಬರೋ ಅಗತ್ಯ ಏನಿತ್ತು? ‘ಕಾಸಿದೆ ಏನ್ ಬೇಕಾದ್ರೂ ಕೊಂಡ್ಕೋತೀನಿ’ ಅನ್ನೋ ಅಹಂಕಾರಾನಾ ಇದು? ಗ್ಲೋಬಲೈಸೇಶನ್ ಅಂದ್ರೆ ಇದೇನಾ?