Sunday, April 27, 2008

ದೇವೇಗೌಡ್ರ ಬೆನ್ನಿಗೆ ಚೂರಿಹಾಕಿದವರು!


ಅದೇ ದೇವೇಗೌಡ್ರ ಕುಟುಂಬ ನೋಡಿ. ಅವ್ರು ಯಾವಾಗ್ಯಾವಾಗ ಬೇರೇಯೋರ ಬೆನ್ನಿಗೆ ಚೂರಿ ಹಾಕ್ಕೊಂಡ್ ಬಂದ್ರೋ... ಆಗಾಗೆಲ್ಲಾ ಉದ್ದಾರ ಆಗ್ತಾ ಬಂದಿದ್ದಾರೆ!

ಈ ನನ್ಮಕ್ಳು ಅತ್ತಿದ್ದು ಎಲೆಕ್ಷನ್ ಟೈಮ್ ಬಿಟ್ರೆ ಬೇರೆ ಯಾವಾಗ್ಲಾದ್ರೂ ನೋಡಿದ್ದೀರಾ?


Saturday, April 26, 2008

ಕಳ್ಳ ಕೊರಮರ ಜೊತೆ ಫೋಟೋ ತೆಗೆಸಿಕೊಂಡಿದ್ದಷ್ಟೇ ಈ ಹೆಂಗಸರಿಗೆ ಸಿಕ್ಕ ಭಾಗ್ಯ!


ಓದು ಬರಹ ಬರದ ಗಾರೆ ಕೆಲಸದ ಹೆಂಗಸರಿಗೆ ಈ ಭ್ರಷ್ಟ ರಾಜಕಾರಣಿಗಳು ತಮ್ಮ ಪಕ್ಷದ ಪ್ರಣಾಳಿಕೆ ಕೊಡುತ್ತಿದ್ದಾರೆ. ಇಂತಹ ಹಾಸ್ಯಾಸ್ಪದ ಸಂಗತಿಗಳನ್ನ ಒನ್ನೊಂದಷ್ಟು ದಿನ ಕರ್ನಾಟಕದ ಜನತೆ ನೋಡಿ ಆನಂದಿಸಬಹುದು.

Monday, April 21, 2008

ಒಂದೇ ದಿನದಲ್ಲಿ 2582 ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯ!

http://thatskannada.oneindia.in/news/2008/04/21/essel-social-service-awards-2008.html

ಈಗ ವಸಿ ಲೆಕ್ಕ ಆಕೋಣ. ಒಂದು ದಿನದಾಗೆ ೨೪ ಗಂಟೆಗಳ ಕಾಲ ಎಡಬಿಡದಂಗೆ ಕೆಲಸ ಮಾಡಿದ್ರೂ 24*60 = 1440 ನಿಮಿಷಗಳಲ್ಲಿ 2582 ರೋಗಿಗಳಿಗೆ ಚಿಕಿತ್ಸೆ ನೀಡಿದ್ರು ಅಂದ್ರೆ ಸರಾಸರಿ ಒಬ್ಬ ರೋಗಿಗೆ 33 ಸೆಕೆಂಡುಗಳು!

ಈ ಪ್ರತೀ 33 ಸೆಕೆಂಡುಗಳಲ್ಲಿ ಇದಿಷ್ಟು ನಡೆಯಬೇಕು...

೧) ಒಳಗೆ ಕುಂತಿರೋ ರೋಗಿ ಒರಗ್ ಓಗ್ಬೇಕು. ಇನ್ನೊಬ್ಬ ಒಳಗ್ ಬರ್ಬೇಕು.
೨) ರೋಗಿ ಡಾಕಟ್ರಪ್ಪನಿಗೆ ತನ್ನ ಕಾಯಿಲೆ ಲಕ್ಷಣಗಳನ್ನು ಏಳ್ಬೇಕು.
೩) ಡಾಕಟ್ರಪ್ಪ ಸ್ಟೆತಸ್ಕೋಪ್, ಥರ್ಮಾಮೀಟರ್ ಹಿಡಕೊಂಡು ರೋಗಿಯ ಕಣ್ಣು ಬಾಯಿ ಚೆಕಪ್ ಮಾಡ್ಬೇಕು.
೪) ಓಷಧಿಗಳನ್ನು ಚೀಟಿನಾಗೆ ಬರ್ದು ಕೊಡ್ಬೇಕು.
೫) ನೆಕ್ಸ್ಟ್....

ನಿಜಕ್ಕೂ ಈ ಡಾಕಟ್ರಪ್ಪ ಇಷ್ಟು ರೋಗಿಗಳಿಗೆ ಈ ಮೇಲಿನ ಕ್ರಮದಾಗೆ ಔಸದಿ ಚಿಕಿತ್ಸೆ ಕೊಟ್ಟಿದ್ರೆ ಲಿಮ್ಕಾ ಯಾಕೆ? ಅದೊಂದು ಗಿನ್ನಿಸ್ ದಾಖಲೆಯೇ ಆಗ್ಬೇಕು ಸರಿ. ಅಥವಾ ಇನ್ನೂ ಒಂದು ರೀತಿ ಆಗಿರಬಹುದು. ಎಲ್ಲಾ ರೋಗಿಗಳನ್ನು ಒಂದು ದೊಡ್ಡ ಮೈದಾನದಲ್ಲಿ ಸೇರಿಸಿಬಿಟ್ಟು ಡಾಕಟ್ರಪ್ಪ ಇಂಗೆ ಏಳಿರ್ಬೈದು

“ನೋಡ್ರೆಲಾ... ಯಾರ್ಯಾರಿಗೆ ತಲೀ ಬ್ಯಾನಿ ಇದೆಯೋ ಅವರೆಲ್ಲಾ ಸಾರಿಡಾನ್ ನುಂಗಿಬಿಡಿ. ನೆಗಡಿ ಬಂದು ಮೂಗು ಸೋರ್ತಾ ಇದ್ರೆ ಕೋಲ್ಡರಿನ್ ನುಂಗಿಬಿಡಿ. ಒಟ್ಟೆ ಸರಿ ಇಲ್ದೋರು, ಜ್ವರ ಗಿರ ಬಂದಿರೋರು, ಕೆಮ್ಮು ಇತ್ಯಾದಿ ಇರೋರು ಇಂತಿಂತ ಔಸಧಿ ಕುಡ್ದುಬಿಟ್ರೆ ಎಲ್ಲಾ ಸರಿ ಓಯ್ತದೆ. ಇನ್ನು ಕ್ಯಾನ್ಸರ್ರು, ಹಾರ್ಟು ಪ್ರಾಬ್ಲಮ್ ಇರೋರು ಇವತ್ತು ಬ್ಯಾಡ. ನಾಳೆ ಬನ್ನಿ. ಅದ್ನ ಚೆಕಪ್ ಮಾಡೋಕೆ ತುಂಬಾ ಟೈಮಾಯ್ತದೆ. ಇವತ್ತು ಗಿನ್ನೀಸ್ ಬುಕ್ ಕಾಂಟೆಸ್ಟ್ ಇರೋದ್ರಿಂದ ಈವತ್ತಾಗಲ್ಲ. ಕ್ಷಮ್ಸಿಬುಡಿ.”

ಅಂದಹಾಗೆ 2582 ರೋಗಿಗಳಲ್ಲಿ ಎಷ್ಟು ಜನ ರಾತ್ರಿ ಔಸಧಿ ಕುಡ್ದು ಮಲಗಿ ಮಾರ್ನೇ ದಿನ ಬೆಳಿಗ್ಗೆ ಎದ್ದರು ಅಂತ ನ್ಯೂಸ್ನಾಗೆ ಆಕೇ ಇಲ್ಲ!